ತಂಗಾಳಿ ತಂದೆಯ
ಲವ್ ಗುರು ಬೆನ್ನಿ ಡೇಯಲ್
ಕವಿರಾಜ್
ಜೊಷುವ ಶ್ರೀಧರ್
ತಂಗಾಳಿ ತಂದೆಯಾ ನನ್ನ ಬಾಳಲಿ
ಸಂಗಾತಿ ಆಗುವ ಸವಿಗನಸಲಿ
ಕೈಜಾರಿ ಹೋದೆಯ ನನ್ನ ಪ್ರೀತಿಯ
ಮಣ್ಣಲ್ಲಿ ಹೂತೆಯ ನಗುತ ನಗುತ || ಪ ||
ಕುಂತು ನಿನ ಕಾಲ ಕೆಳಗೆ
ನಾ ಹೂವು ಹಿಡಿದಂತ ಘಳಿಗೆ
ನಿನಗೇಕೆ ನನ್ನ ಪ್ರೀತಿ ಗೊತ್ತೇ ಆಗದೆ ಹೋಯ್ತು
ಎಷ್ಟೊಂದು ಸಾರಿ ನಾ ಮನಸನ್ ತೆರೆದೆ ನಿನ್ಮುಂದೆ
ಒಂದೊಂದು ಸಾರಿನು ಅರಿಯದೇಕೆ ನೀ ಹೋದೆ
ಈ ಹಣೆಯಲ್ಲಿ ನಿನ್ನ ಒಲವ ಗೀಚಿಲ್ಲ ಬ್ರಹ್ಮ || ೨ ||
ನಿಂಗೆ ಅನಿಸಿಲ್ಲವೇನು ನಿಂಗಾಗೆ ಬಂದೋನು ನಾನು
ಈ ನನ್ನ ಕಣ್ಣ ಭಾಷೆ ಓದೇ ಇಲ್ಲ ನೀನೇಕೆ
ಈ ಗಾಳಿ ಕಾಣಲ್ಲ ಅನುಭವವುಂಟು ಸುಳ್ಳಲ್ಲ
ಈ ಪ್ರೀತಿ ಹೀಗೇಕೆ ಹೇಳದೆ ತಿಳಿಯೋದೇ ಇಲ್ಲ
ಈ ನಿಜ ಅರಿಯೋ ಮುನ್ನ ಕಳೆದು ಕುಂತೆ ನಾ ನಿನ್ನ || ೨ ||
ಲವ್ ಗುರು
ಚಿತ್ರ ನೋಡಿ